ಯಶವಂತಪುರ ಪಾದಚಾರಿ-ಸೇತುವೆ ಹೇಗೆ ಸಂಚಾರದ ಸಮಯ ಮತ್ತು ಮಾಲಿನ್ಯವನ್ನು ಕಡಿತಗೊಳಿಸುತ್ತದೆ

ಯಶವಂತಪುರದ ಸಾರಿಗೆ ಏಕೀಕರಣ

ನವೀಕರಣದ ಅಡಿಯಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ. ನಾಗರಿಕರು ಇಲ್ಲಿ ಎಫ್‌ಒಬಿಯನ್ನು ಒತ್ತಾಯಿಸುತ್ತಲೇ ಇದ್ದಾರೆ ಚಿತ್ರ: ಅಭಿಷೇಕ್ ಆರ್
ನವೀಕರಣದ ಅಡಿಯಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ. ನಾಗರಿಕರು ಇಲ್ಲಿ ಎಫ್‌ಒಬಿಯನ್ನು ಒತ್ತಾಯಿಸುತ್ತಲೇ ಇದ್ದಾರೆ ಚಿತ್ರ: ಅಭಿಷೇಕ್ ಆರ್

Translated by Purushothama Nag and Umesh Babu Pillegowda

ಪ್ರಮುಖ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ (ಪೀಣ್ಯ ರಸ್ತೆ) ಇವೆಲ್ಲವೂ ಯಶವಂತಪುರ ಉಪನಗರದಲ್ಲಿ ಪರಸ್ಪರ ಹತ್ತಿರವಿವೆ. ಆದರೆ ಈ ಸಾರಿಗೆ ವಿಧಾನಗಳು ಸರಿಯಾಗಿ ಸಂಯೋಜಿತವಾಗಿಲ್ಲ, ಇಲ್ಲಿ ಸಾರ್ವಜನಿಕ ಸಾರಿಗೆ ಬಳಸುವಲ್ಲಿ ದೊಡ್ಡ ತೊಂದರೆಗಳು ಉಂಟಾಗುತ್ತಿವೆ.

ಹಳೆಯ ರೈಲ್ವೆ ನಿಲ್ದಾಣದಿಂದ ಮೆಟ್ರೊಗೆ 2.3 ಕಿ.ಮೀ

ಕೆಳಗಿನ ನಕ್ಷೆಯು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 1 ಇರುವ ಯಶವಂತಪುರ ಹಳೆ ಪ್ರವೇಶದ್ವಾರದಿಂದ ಮೆಟ್ರೋ ನಿಲ್ದಾಣದವರೆಗಿನ ಅಂತರವನ್ನು ತೋರಿಸುತ್ತದೆ. ಈ ಅಂತರ ಕ್ರಮಿಸುವ ವಿಸ್ತರಣೆಯು ಸುಮಾರು 2.3 ಕಿ.ಮೀ ಉದ್ದ ಆಗಿರುತ್ತದೆ.

ಪ್ಲಾಟ್‌ಫಾರ್ಮ್ 8 ಇರುವ ಯಶವಂತಪುರ ಹೊಸ ಪ್ರವೇಶದ್ವಾರದಿಂದ ಮೆಟ್ರೋ ನಿಲ್ದಾಣಕ್ಕೆ ಇರುವ ಅಂತರವು ಚಿಕ್ಕದಾಗಿದೆ. ಆದರೆ ಈ ಎರಡರ ನಡುವೆ ಮೀಸಲಾದ ಮಾರ್ಗದ ಕೊರತೆಯಿಂದಾಗಿ ಪ್ರಯಾಣಿಕರಿಗೆ, ವಿಶೇಷವಾಗಿ ಸರಕು ಸಾಮಾನು ಹೊಂದಿರುವವರಿಗೆ ಮೆಟ್ರೊದಿಂದ ರೈಲ್ವೆಗೆ ಹಾಗೂ ರೈಲ್ವೆಯಿಂದ ಮೆಟ್ರೊಗೆ ಬದಲಾಯಿಸುವುದು ಕಷ್ಟವಾಗುತ್ತದೆ.

ಯಶವಂತಪುರ ಹಳೆಯ ರೈಲ್ವೆ ನಿಲ್ದಾಣದಿಂದ ಯಶ್ವಂತಪುರ ಮೆಟ್ರೋ ನಿಲ್ದಾಣದವರೆಗೆ ರಸ್ತೆ ಮೂಲಕ ಸಂಚರಿಸಲು ಸುಮಾರು 2.3 ಕಿ.ಮೀ ಉದ್ದ. ಚಿತ್ರ: ರಾಜ್‌ಕುಮಾರ್ ದುಗಾರ್
ಯಶವಂತಪುರ ಹಳೆಯ ರೈಲ್ವೆ ನಿಲ್ದಾಣದಿಂದ ಯಶ್ವಂತಪುರ ಮೆಟ್ರೋ ನಿಲ್ದಾಣದವರೆಗೆ ರಸ್ತೆ ಮೂಲಕ ಸಂಚರಿಸಲು ಸುಮಾರು 2.3 ಕಿ.ಮೀ ಉದ್ದ. ಚಿತ್ರ: ರಾಜ್‌ಕುಮಾರ್ ದುಗಾರ್

ರೈಲ್ವೆ  ಬಳಕೆದಾರರು ಮಾತ್ರವಲ್ಲ, ಇತರ ಸಾವಿರಾರು ಜನರು ಪ್ರತಿದಿನ ಯಶವಂತಪುರ ಹಳೆ ಪ್ರವೇಶದ್ವಾರದಿಂದ ಮೆಟ್ರೋ / ರಾಷ್ಟ್ರೀಯ ಹೆದ್ದಾರಿ ಬದಿಗೆ ಬಹಳ ಸುತ್ತು ವೃತ್ತಾಕಾರ ಮಾರ್ಗವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಪ್ರದೇಶವು ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿದೆ ಮತ್ತು ದೈನಂದಿನ ಪ್ರಯಾಣಕ್ಕಾಗಿ ಹೆಚ್ಚು  ದಟ್ಟಣೆ ಮಾರ್ಗವಾಗಿದೆ.

ಹಳೆಯ ಯಶವಂತಪುರ ಭಾಗವು ಜನವಸತಿ ಕೇಂದ್ರವು ಹೌದು, ಅದು ಒಂದು ವಾಣಿಜ್ಯ ಪ್ರದೇಶವು ಆಗಿರುತ್ತದೆ. ಹಾಗೂ ಆರ್‌ಟಿಒ ಕಚೇರಿಯಿಂದ ಕೂಡಿದೆ. ಮೆಟ್ರೋ / ರಾಷ್ಟ್ರೀಯ ಹೆದ್ದಾರಿ ಭಾಗವು ಎಪಿಎಂಸಿ (ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ) ಯಾರ್ಡ್, ಪ್ರಮುಖ ಕಚೇರಿಗಳು, ಆಸ್ಪತ್ರೆಗಳು, ಹೋಟೆಲ್ಗಳು ಮತ್ತು ವಸತಿ ಸಮುಚ್ಚಯಗಳೊಂದಿಗೆ ಹೆಚ್ಚು ವಾಣಿಜ್ಯೀಕೃತ ಪ್ರದೇಶವಾಗಿದೆ. ರೈಲ್ವೆ  ಬಳಸದ ಬಳಕೆದಾರರು ರೈಲ್ವೆ ಆಸ್ತಿಯನ್ನು ದಾಟಲು ಸಾಧ್ಯವಿಲ್ಲದ ಕಾರಣ, ಅವರು ಈ ಎರಡು ಸ್ಥಳಗಳ ನಡುವೆ ಓಡಾಡಲು 2.3 ಕಿ.ಮೀ ಮಾರ್ಗವನ್ನು ರಸ್ತೆ ಮಾರ್ಗವನ್ನು ಕ್ರಮಿಸುವಂತೆ ಒತ್ತಾಯಿಸಲಾಗುತ್ತದೆ.

ಈ ಮಾರ್ಗದ ದೂರ ಮತ್ತು ದೊಡ್ಡ ಸಂಚಾರ ದಟ್ಟಣೆಯಿಂದಾಗಿ ಆಟೋ ಅಥವಾ ಕ್ಯಾಬ್ ಮೂಲಕ ಪ್ರಯಾಣದ ವೆಚ್ಚವು ಹೆಚ್ಚಾಗಿದೆ. ಈ ರಸ್ತೆಯ ಮೂಲಕ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುವುದರಿಂದ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಹೆಚ್ಚಾಗುತ್ತದೆ ಮತ್ತು ಇದರ ಪರಿಣಾಮವಾಗಿ ಮಾನವ ಸಂಪನ್ಮೂಲ ಅಪಾರ ನಷ್ಟವಾಗುತ್ತದೆ.

ಸಾರಿಗೆ ವೆಚ್ಚವನ್ನು ಭರಿಸಲಾಗದ ಬಡ ಜನರು ಹೆಚ್ಚಾಗಿ ಈ ಮಾರ್ಗದಲ್ಲಿ ನಡೆದೇ ಕ್ರಮಿಸಲು ಒತ್ತಾಯಿಸಲ್ಪಡುತ್ತಾರೆ. ಒಂದು ಮಾರ್ಗ ಕ್ರಮಿಸಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳಬಹುದು. ಈ ಸಂಪೂರ್ಣ ವಿಸ್ತರಣೆಯು ಹೆಚ್ಚಿನ ಸಾಂದ್ರತೆಯ ಟ್ರಾಫಿಕ್ ಕಾರಿಡಾರ್ ಆಗಿದ್ದು, ಪ್ರತಿ ಗಂಟೆಗೆ ಸಾವಿರಾರು ವಾಹನಗಳು ಚಲಿಸುತ್ತವೆ.

ಆದರೆ 200 ಮೀ ಅಡಿಯ ಪಾದಚಾರಿ-ಸೇತುವೆ (ಎಫ್‌ಒಬಿ) ವೃತ್ತಾಕಾರದ ಪ್ರಯಾಣದ ಅಗತ್ಯವನ್ನು ನಿವಾರಿಸುತ್ತದೆ. ಹೇಗೆ ಎಂಬುದು ಇಲ್ಲಿದೆ.

ಪಾದಚಾರಿ-ಸೇತುವೆ (ಎಫ್‌ಒಬಿ) ರೈಲ್ವೆ, , ಮೆಟ್ರೋ ಮತ್ತು ಬಸ್ ನಿಲ್ದಾಣವನ್ನು ಸಂಪರ್ಕಿಸುವುದು

ಹೊಸ 200 ಮೀಟರ್ ಪಾದಚಾರಿ ಸೇತುವೆಯು (ಎಫ್‌ಒಬಿ) ಹಳೆಯ ರೈಲ್ವೆ ನಿಲ್ದಾಣದ ಪ್ರವೇಶದ್ವಾರ ಮತ್ತು ಎನ್‌ಎಚ್‌ಗೆ ಅಡ್ಡಲಾಗಿ ಸೂಕ್ತ ವೈಶಿಷ್ಟ್ಯಗಳೊಂದಿಗೆ ರಸ್ತೆ ಬಳಸುವ ಅಗತ್ಯವನ್ನು ನಿವಾರಿಸುತ್ತದೆ. ಹಾಗೂ ರೈಲ್ವೆ ನಿಲ್ದಾಣದ ಹೊರಗೆ ಎಫ್‌ಒಬಿ ಇರಬೇಕು, ಇದರಿಂದ ರೈಲು ಬಳಸದ ಸಾರ್ವಜನಿಕರು ಸಹ ಅದನ್ನು ಪ್ರವೇಶಿಸಬಹುದು.

ಹಳೆಯ ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಈ ಪಾದಚಾರಿ-ಸೇತುವೆ 2.3 ಕಿ.ಮೀ ನಿಂದ 200 ಮೀ ವರೆಗೆ ಪ್ರಯಾಣದ ದೂರವನ್ನು ಕಡಿತಗೊಳಿಸುತ್ತದೆ. ಇದು ಮೆಟ್ರೊ ಬಳಕೆಯನ್ನು ಸಹ ಉತ್ತೇಜಿಸುತ್ತದೆ. ಚಿತ್ರ: ರಾಜ್‌ಕುಮಾರ್ ದುಗಾರ್
ಹಳೆಯ ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಈ ಪಾದಚಾರಿ-ಸೇತುವೆ 2.3 ಕಿ.ಮೀ ನಿಂದ 200 ಮೀ ವರೆಗೆ ಪ್ರಯಾಣದ ದೂರವನ್ನು ಕಡಿತಗೊಳಿಸುತ್ತದೆ. ಇದು ಮೆಟ್ರೊ ಬಳಕೆಯನ್ನು ಸಹ ಉತ್ತೇಜಿಸುತ್ತದೆ. ಚಿತ್ರ: ರಾಜ್‌ಕುಮಾರ್ ದುಗಾರ್

ಈ ಸೇತುವೆ ಪಾದಚಾರಿಗಳಿಗೆ, ರೈಲು ಮತ್ತು ಮೆಟ್ರೋ ಪ್ರಯಾಣಿಕರಿಗೆ ಮತ್ತು ಬಸ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಸ್ ನಿಲ್ದಾಣವು ಮೆಟ್ರೋ ನಿಲ್ದಾಣದಿಂದ ಕೇವಲ 100 ಮೀ ದೂರದಲ್ಲಿದೆ, ಆದುದರಿಂದ ಎಫ್‌ಒಬಿ ಅದಕ್ಕೆ ಸುಲಭ ಪ್ರವೇಶವನ್ನು ನೀಡುತ್ತದೆ. ಒಟ್ಟಾರೆಯಾಗಿ ಎಫ್‌ಒಬಿಯು  ಕಾಲುನಡಗೆ, ರೈಲ್ವೆ, ಬಸ್ ಮತ್ತು ಮೆಟ್ರೊ ಹೀಗೆ ಅನೇಕ ಸಾರಿಗೆ ವಿಧಾನಗಳನ್ನು ಸಂಯೋಜಿಸುತ್ತದೆ ಮತ್ತು ಈ ಪ್ರದೇಶದಲ್ಲಿನ ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ಕೆಲ ಸಮಯದಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ರೀತಿಯಲ್ಲಿ ಈ ಎಫ್‌ಒಬಿಯನ್ನು ಬೆಂಗಳೂರಿಗರು ವಿನಂತಿಸುತ್ತಿದ್ದಾರೆ. ಇತ್ತೀಚೆಗೆ ನಾಗರಿಕರ ಮನವಿಗೆ ಪ್ರತಿಕ್ರಿಯೆಯಾಗಿ ಬೆಂಗಳೂರಿನ ವಿಭಾಗೀಯ ರೈಲ್ವೆ  ವ್ಯವಸ್ಥಾಪಕರು ಎಫ್‌ಒಬಿಗೆ ಟ್ವೀಟ್ ಮಾಡಿದ್ದಾರೆ, “ರೈಲ್ವೆ ಮತ್ತು ಬಿಎಂಆರ್‌ಸಿಎಲ್ ನಡುವೆ ಎಂಒಯು ಅಂತಿಮಗೊಳಿಸಲಾಗಿದೆ. ಶೀಘ್ರದಲ್ಲೇ ಬಿಎಂಆರ್‌ಸಿಎಲ್ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ”

ಸಿಟಿಜನ್ ಮ್ಯಾಟರ್ಸ್‌ನೊಂದಿಗೆ ಮಾತನಾಡಿದ ಎಸ್‌ಡಬ್ಲ್ಯುಆರ್‌ನ ಹಿರಿಯ ವಿಭಾಗೀಯ ಎಂಜಿನಿಯರ್ (ಸಮನ್ವಯ) ಪರ್ವೇಶ್ ಕುಮಾರ್, ಕೆಲವೇ ದಿನಗಳಲ್ಲಿ ಎಂಒಯು ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಆದಾಗ್ಯೂ, ಮುಂದಿನ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗೆ ಅನುಮತಿ ನೀಡಬೇಕಿದ್ದು, ಆಗ ಮಾತ್ರ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಎಂದು ಅವರು ಹೇಳಿದರು.

ಯೋಜನೆಯು ಆರಂಭಿಕ ಹಂತದಲ್ಲಿರುವುದರಿಂದ, ಬಿಎಂಆರ್‌ಸಿಎಲ್ ಮತ್ತು ಎಸ್‌ಡಬ್ಲ್ಯುಆರ್ ಎಫ್‌ಒಬಿಗೆ ಈ ಕೆಳಗಿನ ಸಲಹೆಗಳನ್ನು ಪರಿಗಣಿಸಬಹುದು. ಆದಾಗ್ಯೂ  ಪ್ರಜಾ ರಾಗ್ ಮತ್ತು ನಾಗರಿಕರಿಗಾಗಿ ನಾಗರಿಕರು ಎಂಬ ಎರಡು ನಾಗರಿಕ ಗುಂಪುಗಳು ಪ್ರಸ್ತಾಪಿಸುತ್ತಿವೆ.

ವೈಶಿಷ್ಟ್ಯಗಳು

  • ಎತ್ತರದ ಕಾಲು ಸೇತುವೆಯ ಉದ್ದ: 200 ಮೀ
  • ಎತ್ತರ: ಸುಮಾರು 15 ಮೀ
  • ಅಗಲ: ಸುಮಾರು 10 ಮೀ
  • ಎರಡೂ ತುದಿಗಳಲ್ಲಿ ಸೂಕ್ತವಾದ ಎಸ್ಕಲೇಟರ್ ಮತ್ತು ಮೆಟ್ಟಿಲುಗಳ  ಸೌಲಭ್ಯ
  • ಯಾವುದೇ ಬಳಕೆದಾರರ ಶುಲ್ಕ ವಿಧಿಸಬಾರದು
  • ಕನಿಷ್ಠ ಒಂದು ತುದಿಯಲ್ಲಿ ಸೂಚನಾ ಫಲಕ ಸಹಿತ ಸಾರ್ವಜನಿಕ ಶೌಚಾಲಯ
  • ಸೂಕ್ತ ವಾತಾಯನಬೆಳಕಿನಿಂದ ಮತ್ತು ಸಂಪೂರ್ಣ ಸುರಕ್ಷತೆಗಾಗಿ ಮುಚ್ಚಿದ ರೀತಿಯಲ್ಲಿ ನಿರ್ಮಿಸುವುದು
  • ರಾತ್ರಿ ಬಳಕೆಗೆ ವಿದ್ಯುತ್ ದೀಪಗಳ ಅಳವಡಿಕೆ
  • ಸೇತುವೆಯ ಮೇಲೆ ಅಥವಾ ಸೇತುವೆ ಪ್ರದೇಶದಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳಿಗೆ ಅನುಮತಿ ನೀಡದಿರುವುದು
  • ಸಿಸಿಟಿವಿ ಕ್ಯಾಮೆರಾಗಳು ಇತ್ಯಾದಿಗಳೊಂದಿಗೆ ಭದ್ರತೆಯನ್ನು ಒದಗಿಸುವುದು
  • ರೈಲ್ವೆ ನಿಲ್ದಾಣದೊಳಗೆ ಅಸ್ತಿತ್ವದಲ್ಲಿರುವ ಎಫ್‌ಒಬಿಗೆ  ಈ ಹೊಸ ಎಫ್‌ಒಬಿ ಸಂಪರ್ಕ ಹೊಂದಲು ಅವಕಾಶ ನೀಡುವುದು, ಇದರಿಂದ ಪ್ರಯಾಣಿಕರು ನೇರವಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ಗಳಿಗೆ ಕಾಲಿಡಬಹುದು. ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ನೀಡಲು ರೈಲ್ವೆ ಸಹ ಕೌಂಟರ್ ಅನ್ನು ಇಲ್ಲಿ ಸ್ಥಾಪಿಸಬಹುದು, ಇದರಿಂದಾಗಿ ಪ್ರಯಾಣಿಕರೊಂದಿಗೆ ಬರುವವರು ಸಹ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದು.

ಪ್ರಯೋಜನಗಳು

  • ಕ್ರಮಿಸುವ ದೂರದಲ್ಲಿ 2300 ಮೀ ನಿಂದ 200 ಮೀ ತೀವ್ರ ಕಡಿತ 
  • ಹೆಚ್ಚಿನ ಜನರಿಗೆ ಸುಲಭವಾಗಿ ನಡೆಯಲು ಹಾಗೂ ಸುರಕ್ಷಿತ ರಸ್ತೆ ದಾಟಲು ಅವಕಾಶ ಕಲ್ಪಿಸುತ್ತದೆ
  • ಸಮಯ, ಇಂಧನ ಮತ್ತು ವೆಚ್ಚದಲ್ಲಿ ಭಾರಿ ಉಳಿತಾಯವಾಗುತ್ತದೆ. ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆಮಾಡಬಹುದು
  • ಹಳೆಯ ರೈಲ್ವೆ ನಿಲ್ದಾಣದ ಹಾಗೂ ರಾಷ್ಟ್ರೀಯ ಹೆದ್ದಾರಿ ಸುತ್ತ-ಮುತ್ತ  ವಾಸಿಸುವ ಮತ್ತು ಕೆಲಸ ಮಾಡುವ ಸಾವಿರಾರು ಜನರಿಗೆ ವಿಶೇಷವಾಗಿ ಸಹಾಯಕವಾಗಲಿದೆ
  • ಮತ್ತು ಹಳೆಯ ಯಶವಂತಪುರ ನಿಲ್ದಾಣದ ಕಡೆಯಿಂದ ಸಾವಿರಾರು ಜನರು ಮೆಟ್ರೋಬಳಸಲು ಅನುವು ಮಾಡಿಕೊಡುತ್ತದೆ

ಎಸ್‌ಡಬ್ಲ್ಯುಆರ್ ಮತ್ತು ಬಿಎಂಆರ್‌ಸಿಎಲ್ ಸಂಸ್ಥೆಗಳು ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಮತಿಗೊಳಿಸಿ, ಮತ್ತು ವೇಗದ ರೀತಿಯಲ್ಲಿ ನಿರ್ಮಿಸುವ ಕೆಲಸವನ್ನು ಸಂಪೂರ್ಣಗೊಳಿಸಬೇಕು. ಎರಡು ಏಜೆನ್ಸಿಗಳು ಈ ಯೋಜನೆಯನ್ನು ಹೆಚ್ಚಿನ ಆದ್ಯತೆಯೊಂದಿಗೆ ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದರೆ, ನಾವು ಜನಪ್ರತಿನಿಧಿಗಳಾದ – ಸ್ಥಳೀಯ ಶಾಸಕ, ಉಪಮುಖ್ಯಮಂತ್ರಿ ಸಿ. ಎನ್. ಅಶ್ವತ್ಥನಾರಾಯಣ, ಸಿಎಂ, ಎಂಒಎಸ್ ರೈಲ್ವೆ ಮತ್ತು ಇತರರಿಗೆ ಮನವಿ ಮಾಡಿ ಮಧ್ಯಪ್ರವೇಶಿಸಿ ಅಗತ್ಯವನ್ನು ಖಚಿತಪಡಿಸಿಕೊಳ್ಳುತ್ತೇವೆ.

[ಏಕ್ತಾ ಸಾವಂತ್ ಈ ಲೇಖನಕ್ಕೆ ಕೊಡುಗೆ ನೀಡಿದ್ದಾರೆ]

Read the original in English here.

About our volunteer translators

Purushothama Nag is from Attibele, and is currently a resident of JP Nagar. He works as a lead software developer. He is a bike rider and avid traveler who’d like to travel all over the world. 

Umesh Babu Pillegowda is a resident of Byatarayanapura. He is a civic leader with B.PAC, and a Bengalurean by heart.

Support Citizen Matters - independent, Reader-funded media that covers your city like no other.DONATE
About Rajkumar Dugar 6 Articles
Rajkumar Dugar, Founder and Convenor of Citizens for Citizens (C4C), works on civic initiatives in and around Vasanth Nagar. He hopes citizens in other areas will replicate and improve upon these projects, to leave the surroundings “a little better than I found it”