“ಟಿಕೆಟ್ ದರ ತಗ್ಗಿಸುವುದೇ ಪ್ರಯಾಣಿಕರನ್ನು ಬಸ್ಸಿನೆಡೆಗೆ ಸೆಳೆಯುವ ಮೂಲ ಮಂತ್ರ”

BMTC ಬಸ್ ಶುಲ್ಕಗಳು

ಬೆಂಗಳೂರಿನಲ್ಲಿ, ದ್ವಿಚಕ್ರವಾಹನಗಳೇ ಬಸ್ಸ್ ಗಿಂತ ಬಲು ಅಗ್ಗ. ಚಿತ್ರ: ಶ್ರೀ ಡಿ ನ್

Translated by Ankitha Kamath and Katyayini


Reliable, useful journalism needs your support.

Over 600 readers have donated over the years, to make articles like this one possible. We need your support to help Citizen Matters sustain and grow. Please do contribute today. Donate now


ಬೆಂಗಳೂರಿನ ರಸ್ತೆಗಳಲ್ಲಿನ ವಾಹನ ದಟ್ಟನೆ ಸಡಲಿಸಲು ಸಾಕಷ್ಟು ಉಪಾಯಗಳು ಕೇಳಿ ಬಂದಿವೆ. #ಸೈಕಲ್-ಟು-ವರ್ಕ್ ಫ್ರೈಡೇ ಆಂದೋಲನ ಈ ಸಾಲಿಗೆ ಹೊಸ ಸೇರ್ಪಡೆ. ರಾಜ್ಯ ಸರ್ಕಾರದ ಬಸ್ಸ್ ಪ್ರಯೋರಿಟಿ ಲೇನ್ Bus Priority Lane (BPL) ಯೋಜನೆಯು ವಿನೂತನ ಪ್ರಯತ್ನವಾಗಿದೆ. 

ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಜನಪ್ರಿಯಗೊಳಿಸಿ, ಈ ಮೂಲಕ ಖಾಸಗಿ ವಾಹನಗಳ ಬಳಕೆ  ತಗ್ಗಿಸಲು ಉತ್ತೇಜನ ನೀಡಿ ಸಕಾರಾತ್ಮಕ ಬದಲಾವಣೆ ತರುವುದು ಸರ್ಕಾರದ ಚಿಂತನೆಯಾಗಿದೆ.

ಈ ಯೋಜನೆಯ ಬಹುಮುಖ್ಯ ಉದ್ದೇಶ ಶಿಸ್ತಾದ ಸಂಚಾರ, ಮತ್ತು ಸಮಯ ಪಾಲನೆ. 

ಬಸ್ಸುಗಳು ತಮ್ಮ ನಿಗದಿತ ಮಾರ್ಗದಲ್ಲಿ ಯಾವುದೇ ಅಡೆ-ತಡೆಗಳಿಲ್ಲದೆ ಸಂಚರಿಸಲು ಸಾಧ್ಯವಾದಲ್ಲಿ ಸಾರ್ವಜನಿಕರಿಗೆ ಸಮಯವು ಉಳಿತಾಯ, ವಾಹನ ಚಾಲನೆಯ ತಲೆ ಬಿಸಿ ಇಲ್ಲದೆ ನೆಮ್ಮದಿಯ ಪ್ರಯಾಣ. 

ಆದರೆ  ಈ ನೆಮ್ಮದಿಯ ಪ್ರಯಾಣದ ಬೆಲೆ ಜನಸಾಮಾನ್ಯನ ಕಿಸೆಯ ಮೇಲೆ ಹಿತವಾಗಿರಲೂಬೇಕು. 

BMTC ಬಸ್ ಶುಲ್ಕವು ದೇಶದಲ್ಲೇ ಅತಿ ಹೆಚ್ಚು

ಈ ಬಗ್ಗೆ ತಿಳಿಯಲು ದೇಶದ ಇತರೆ ಪ್ರಮುಖ ನಗರಗಳ ಸಾರಿಗೆ ವ್ಯವಸ್ಥೆಗಳ ಪ್ರಯಾಣ ದರಗಳ ಪಟ್ಟಿಯ ಮೇಲೊಂದು ಕಿರುನೋಟ ಇಂತಿದೆ.

 ಬಸ್ ನಿರ್ವಾಹಕರು 5 ಕಿಲೊಮೀಟರ್ ಪ್ರಯಾಣಿಸಲು ಶುಲ್ಕ
ಚಂದಿಗಢ ಸಾರಿಗೆ ಸಂಸ್ಥೆ (ಸಿಟಿಸಿ) 5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 5
ಅಹ್ಮದಾಬಾದ್ ಮಹಾನಗರ ಸಾರಿಗೆ (AMTS)  5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 8
ಕಲ್ಕತಾ ರಾಜ್ಯ ಸಾರಿಗೆ ಸಂಸ್ಥೆ (CSTC)    5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 8
ಮೆಟ್ರೋ ಚೆನ್ನೈ  ಸಾರಿಗೆ ಸಂಸ್ಥೆ (MCTC)  5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 8
ದೆಹಲಿ ಸಾರಿಗೆ ಸಂಸ್ಥೆ (DTC)   5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 10
ಪೂಣೆ ಮಹಾನಗರ ಪರಿವಾಹನ ಮಹಾನಮಂಡಲ (PMPML) 5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 10
ಬೃಹತ್ ಮುಂಬಾಯಿ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ (BEST) 5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 14
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 5 ಕಿ.ಮಿ. ಕ್ರಮಿಸಲು ತಗಲುವ ವೆಚ್ಚ ರೂಪಾಯಿ 15

ಕೃಪೆ : BBPV (ಬೆಂಗಳೂರು ಬಸ್ಸ್ ಪ್ರಯಾಣಿಕರ ವೇದಿಕೆ)

2018ರಲ್ಲಿ ಅಂದಿನ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ BMTC ಹಾಗು KSRTC ದರಗಳಲ್ಲಿ ಶೇಕಡ 18 % ದರ ಏರಿಕೆಯ ಪ್ರಸ್ತಾವ ಮಾಡಿದ್ದರು. ಏರುಗತಿಯಲ್ಲಿದ್ದ ಇಂಧನ ದರ ಕಾರಣದಿಂದ ಮಾಡಲಾದ ಈ ಪ್ರಸ್ತಾವನೆಯಿಂದ ಪ್ರತಿ ಕಿ.ಮಿ.ಗೆ ಇನ್ನೂ ಒಂದು ರೂಪಾಯಿ ದರ ಹೆಚ್ಚಳ ಖರ್ಚು ಬೀಳುವಂತಾಗುತ್ತದೆ. ಈ ಪ್ರಸ್ತಾವನೆಯ ಬಗ್ಗೆ ಸರಕಾರ ಇನ್ನೂ ಚಿಂತನೆ ನಡೆಸುತ್ತಿದೆ.

ವೋಲ್ವೊ ಬಸ್ಸಿನ ಮಾಸಿಕ ಪಾಸ್ ದರ ರೂಪಾಯಿ 2363. ಪ್ರತಿನಿತ್ಯ ಕಾರಲ್ಲಿ ಹೋಗಿ ಬರಲು ತಗಲುವ ಇಂಧನದ ವೆಚ್ಚ, ಕಾರು ಚಾಲನೆಯ ಪ್ರಯಾಸದಿಂದ ಮುಕ್ತಿ ಪಡೆಯಲು ಹಲವರು ಈ ಬೆಲೆ ತೆರಲು ಹೆಚ್ಚು ಯೋಚಿಸುವುದಿಲ್ಲ. ಆದರೆ ಸಾಮಾನ್ಯ ಬಸ್ಸಿನ ಮಾಸಿಕ ಪಾಸ್ ನ್ನು ಕೊಳ್ಳಲು ರೂಪಾಯಿ 1,050 ತೆತ್ತುವುದು ತಿಂಗಳ ದುಡಿಮೆಯ ಒಂದು ದೊಡ್ಡ ಖರ್ಚಾಗಿರುವಾಗ, ಪ್ರತಿ ಕಿ.ಮಿ.ಗೆ ಇನ್ನೂ ಒಂದು ರೂಪಾಯಿ ದರ ಹೆಚ್ಚಳ ಸಾಮಾನ್ಯನ ಜೇಬಿಗೆ ದೊಡ್ಡ ಹೊರೆ ಅನಿಸುವುದು ಖಚಿತ.

ಜನರನ್ನು ಸಾರ್ವಜನಿಕ ಸಾರಿಗೆಯೆಡೆಗೆ ಸೆಳೆಯುಲು ಸಾಧ್ಯವಾಗ , ರಸ್ತೆಗಳ ವಾಹನ ದಟ್ಟನೆ ಕಡಿಮೆಯಾಗಿ , ಒಟ್ಟಾರೆ ನಗರ ಸಂಚಾರದ ಸಕಾರಾತ್ಮಕ ಕ್ರಾಂತಿಯನ್ನು ತರುವುದು BPL ಯೋಜನೆಯ ದೂರದೃಷ್ಟಿಯಾಗಿದೆ. ಈ ಕ್ರಾಂತಿಯನ್ನು ಸಾಕಾರಗೊಳಿಸಲು ದರ ಸಾಮಾನ್ಯ ರ ಕೈಗೆಟಕುವುದು ಮುಖ್ಯ.

ಪಾರಿಸ್ ಮುಂತಾದ ಮಹಾನಗರಗಳಲ್ಲಿ ಸಾರ್ವಜನಿಕ ಸಾರಿಗೆ ಉಚಿತಗೊಳಿಸುವ ಚಿಂತನೆ ಒಂದು ಕಡೆಯಾದರೆ ವಿಶ್ವದಲ್ಲೇ ಅತ್ತತ್ಯುಮ ಸಾರಿಗೆ ಎನಿಸಿಕೊಂಡಿರುವ ಲಂಡನ್ ಮಹಾನಗರಿಯ ದರಗಳು ದುಬಾರಿಯಾಗಿದ್ದರೂ ಸೈ ಎನಿಸಿಕೊಂಡಿವೆ. ಈ ಬಗ್ಗೆ ಟ್ರಾನ್ಸಪೊರ್ಟ್ ಫಾರ್ ಲಂಡನ್ ನ (TFL) ಪ್ರಧಾನ ಟೆಕ್ನೋಲಜಿ ಅಧಿಕಾರಿ ಶಶಿ ವರ್ಮ ನಗರ ಸಂಚಾರ ವ್ಯವಸ್ಥೆಯ ವಿವಿಧ ಆಯ್ಕೆಗಳ ಬಗೆಗಿನ ಚರ್ಚೆಗಾಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿವರಣೆ ನೀಡಿ ಸಾರ್ವಜನಿಕ ಸಾರಿಗೆಯ ವೆಚ್ಚ ಅತ್ಯಂತ ಅಗ್ಗವಾಗಿಡುವ ಅಗತ್ಯವನ್ನು ಪ್ರತಿಪಾದಿಸಿದರು. ಲಂಡನ್ ನಲ್ಲಿ ಕೂಡ TFL ಸಂಸ್ಥೆಯೊಂದೇ ಎಲ್ಲಾ ರೀತಿಯ ಟ್ಯಾಕ್ಸಿ , ಬಸ್ಸು, ಟ್ಯೂಬ್, ಜಲಮಾರ್ಗ – ಖಾಸಗಿ ವಾಹನಗಳನ್ನೂ ಒಳಪಡಿಸಿ ಸಾರಿಗೆ ವ್ಯವಸ್ಥೆಯ ಉಸ್ತವಾರಿ ನಡೆಸುವುದರಿಂದ ಲಂಡನ್ ನ ಸಾರಿಗೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ. ಲಂಡನ್ ನಲ್ಲಿ ಬಸ್ಸು, ಟ್ಯೂಬ್ ಗಳು ದುಬಾರಿ ಎನಿಸಿದರೂ ಅಲ್ಲಿನ ಮಧ್ಯಮ ವರ್ಗದ ಜನತೆಯ ಕೈಗೆಟಕುವಂತಿದೆ. ಖಾಸಗಿ ವಾಹನಗಳನ್ನು ಉಪಯೋಗಿಸಲು ಇನ್ನಷ್ಟು ತೆರಿಗೆ-ಸುಂಕಗಳನ್ನು ತೆರಬೇಕಾದ್ದರಿಂದ ಪ್ರತಿನಿತ್ಯದ ಬಳಕೆಗೆ ಸೂಕ್ತವೆನಿಸುದಿಲ್ಲ ಎಂದು ವಿಶ್ಲೇಷಿಸಿದರು.

ಬೆಂಗಳೂರಿನಲ್ಲಿ ಬಸ್ಸು ಗಳಿಗೆ ಹೋಲಿಸಿದರೆ ಖಾಸಗಿ ದ್ವಿಚಕ್ರವಾಹನ ಚಾಲನೆಯ ವೆಚ್ಚ ಬಹಳ ಅಗ್ಗವಾಗಿರುವುದು ಈ ಕೆಳಗಿನ ಚಾರ್ಟ್ ನಿಂದ ಗೋಚರವಾಗುತ್ತದೆ

ಮೆಟ್ರೋ ದರ ಹಾಗು ಬಸ್ಸು ಸಂಚಾರ ವೆಚ್ಚ ಹೆಚ್ಚುಕಡಿಮೆ ಒಂದೇ ಆಗಿದೆ. ಆದರೆ ಮೆಟ್ರೋದಲ್ಲಿ ನಿಗದಿತ ವೇಳಾಪಟ್ಟಿ ಸಂಚಾರದ ಅನುಕೂಲತೆ , ಪ್ರಯಾಣದ ಸಮಯದ ಉಳಿತಾಯ ಲಭಿಸುತ್ತದೆ.

ಖಾಸಗಿ ದ್ವಿಚಕ್ರವಾಹನಗಳು ಮೆಟ್ರೋ ಬಸ್ಸು ಗಳಿಗಿಂತಲೂ ಅಗ್ಗ. ಚಿಕ್ಕ ಸಂದಿಗಳಲ್ಲೂ ಕ್ರಮಿಸಲು ಸಾಧ್ಯ. ಜಾಮ್ ಆಗಿರುವ ರಸ್ತೆ-ಇಕ್ಕೆಲಗಳಲ್ಲೂ ನುಗ್ಗಿ ನುಸುಳುವ ಮಾಯಾಶಕ್ತಿ. ಹೀಗಿರುವಾಗ ಪ್ರಯಾಸಕಾರಿ ದುಬಾರಿ BMTCಯ ಸವಾರಿ ಸಾಮಾನ್ಯರ ಕಣ್ಣ್ ಸೆಳೆಯುವುದಾದರೂ ಹೇಗೆ ?

ಇತರೆ ಪ್ರಮುಖ ನಗರಗಳ ಸಾರಿಗೆಗಳಿಗಿಂತ ಬೆಂಗಳೂರು ಸಾರಿಗೆ BMTCಯ ದರ ಜಾಸ್ತಿ ಏಕೆಂದರೆ BMTCಯದ್ದು ಲಾಭಾಧಾರಿತ ವ್ಯವಹಾರ ಮಾದರಿ. BMTCಯ ಶೇ. 90ರಷ್ಟು ಆದಾಯದ ಮೂಲ ಟಿಕೆಟ್ ಮಾರಟ. ಈ ಬಗ್ಗೆ ಮಾತನಾಡಿದ ಬೆಂಗಳೂರು ಬಸ್ಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ರವರು ಸರಕಾರ ಮಧ್ಯ ಪ್ರವೇಶಿಸಿ BMTCಗೆ ಸಬ್ಸಿಡಿ ನೀಡಿಬೇಕೆಂದೂ BMTCಯು ಇತರೆ ಮೂಲಗಳಿಂದಲೂ ಆದಾಯಗಳಿಸಲು ಉಪಾಯ ಮಾರ್ಗಗಳಿವೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಸರಕಾರಕ್ಕೂ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

BMTCಯು ಪ್ರಸ್ತುತ ಲಾಭಾಧಾರಿತ ವ್ಯವಹಾರ ಮಾದರಿ ಪಾಲಿಸದೆ , ಸೇವಾ ವ್ಯವಹಾರ ಮಾದರಿಯನ್ನು ಪಾಲಿಸಲಿ ಎಂಬ ಚರ್ಚೆಯು ಹೊಸತೇನಲ್ಲ. ಆದರೆ ಆ ಬಗ್ಗೆ ನಾನು ಈ ಅಂಕಣದಲ್ಲಿ ಹೆಚ್ಚು ವಿಶ್ಲೇಷಿಸಲು ಬಯಸುವುದಿಲ್ಲ.

ಆದರೂ ಈ ಅಂಕಿಅಂಶಗಳ ಪರಿಶೀಲನೆಯಿಂದ ಬಹು ಸ್ಪಷ್ಟವಾಗಿ ತೋರುವುದೆನೆಂದರೆ ಸಾರ್ವಜನಿಕ ಸಾರಿಗೆಯ ಮಹತ್ವಾಕ್ಷಾಂಕ್ಷಿ ಯೋಜನೆ ಜಯಿಸಲು ಇನ್ನೂ ಸಾಕಷ್ಟು ಪ್ರಯತ್ನ ಮಾಡಬೇಕಾಗಿದೆ. ಬಸ್ಸುಗಳ ಅಶಿಸ್ತಾದ ವೇಳಾಪಟ್ಟಿಯೇ ಒಂದು ಕಿರಿಕಿರಿ. ಹೀಗಿರುವಾಗ ಪಬ್ಲಿಕ್ ಟ್ರಾನ್ಸಪೊರ್ಟ್ ನತ್ತ ಜನರ ಮನ ಸೆಳೆಯಲು ದರಪಟ್ಟಿಯ ಪುನರ್ ಪರಿಶೀಲನೆ ಲೇಸೆನಿಸುತ್ತದೆ.

Read the original in English here.

About our volunteer translators

Ankitha is a resident of Kathreguppe, Bengaluru.

Katyayini is a resident of MSR Nagar, Mathikere. She is an accounts officer with a central government organisation.

WE WANT TO THANK YOU
for reading Citizen Matters, of course. It would be fantastic to be able to thank you for supporting us as well. For 12 years we have strived to bring you trustworthy and useful information about our beloved Bengaluru. Because informed citizens are crucial to make a better city. Support Citizen Matters today.

DONATE NOW

About Manasi Paresh Kumar 105 Articles
Manasi Paresh Kumar is Engagement Editor for Bengaluru Citizen Matters.