ಬಿಬಿಎಂಪಿ ಅಭ್ಯರ್ಥಿಗಳೇ, ಬೆಂಗಳೂರಿನ ಮತದಾರರ ಮನೆಬಾಗಿಲು ತಟ್ಟಲು ಇಲ್ಲಿದೆ ಸರಳವಿಧಾನ!

ನಿಮ್ಮ ಮನೆಯೆದುರಿಗಿನ ರಸ್ತೆಯಿರಬಹುದು, ಕಸವೇ ಇರಬಹುದು ಅಥವಾ ಬೀದಿ ದೀಪಗಳೇ ಇರಬಹುದು, ಎಲ್ಲವೂ ಸರಿಯಾಗಿರುವಂತೆ, ಕಾಲಕಾಲಕ್ಕೆ ರಿಪೇರಿಗಳಾಗುವಂತೆ ನೋಡಿಕೊಳ್ಳಬೇಕಾಗಿರುವುದು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಕರ್ತವ್ಯ. ಪಾಲಿಕೆ ಚುನಾವಣೆಗಳು ಇನ್ನೇನು ನಡೆಯಲಿವೆ. ಇದು ನಿಮ್ಮ ವಾರ್ಡ್, ನಿಮ್ಮ ರಸ್ತೆ, ನೀವಿರುವ ಜಾಗದಲ್ಲಿ ಎಲ್ಲವೂ ಸರಿಯಿರುವಂತೆ ನೋಡಿಕೊಳ್ಳುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಲು ನಿಮಗಿರುವ ಸುವರ್ಣಾವಕಾಶ.

ಈ ಸಮಯದಲ್ಲಿ, ಪಾಲಿಕೆ ಚುನಾವಣೆಯ ವಿಶೇಷ ವರದಿಗಾಗಿ ನಾವು ನಿಮ್ಮ ವಾರ್ಡಿನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿವರಗಳನ್ನು ಕಲೆಹಾಕಿ ನಿಮಗೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಹಾಗೂ ಇಂಗ್ಲೀಷಿನಲ್ಲಿರುವ ಈ ಅರ್ಜಿಯನ್ನು, ನಮ್ಮ ವಿಶೇಷ ಪುಟಗಳಲ್ಲಿ ತಮ್ಮನ್ನು ತಾವು ಕಾಣಬಯಸುವ ಅಭ್ಯರ್ಥಿಗಳು ಭರ್ತಿ ಮಾಡಬಹುದಾಗಿದೆ. ಇದು ಸಾರ್ವಜನಿಕ ಹಿತಾಸಕ್ತಿಯಿಂದ ಮಾಡುವಂತಹ ಕಾರ್ಯಕ್ರಮವಾಗಿದ್ದು ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.

ನೀವು ನಮ್ಮ ಓದುಗರಾಗಿದ್ದಲ್ಲಿ:

ನೀವು ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆಗೊಳಿಸಿ ಬೆಂಗಳೂರನ್ನು ಉತ್ತಮಗೊಳಿಸುವ ಕನಸು ಹೊಂದಿದ್ದೀರಾ? ಹಾಗಿದ್ದಲ್ಲಿ ನಮ್ಮ ಈ ಯತ್ನವು ಹೆಚ್ಚು ಅರ್ಥಪೂರ್ಣ ಹಾಗೂ ಮಾಹಿತಿಭರಿತವಾಗುವಂತೆ ಮಾಡಲು ದಯವಿಟ್ಟು ಸಹಾಯ ಮಾಡಿ.

 • ನಿಮ್ಮ ಗೆಳೆಯರು ಅಥವಾ ಸಂಬಂಧಿಕರಲ್ಲಿ ಪಾಲಿಕೆ ಚುನಾವಣೆ ಸ್ಪರ್ಧಿಸಬಯಸುವವರಿದ್ದಲ್ಲಿ ಈ ಅಂತರ್ಜಾಲ ಪುಟವನ್ನು ಅವರಿಗೆ ಕಳುಹಿಸಿ.
 • ಈ ಪುಟ ಹಾಗೂ ವಿಶೇಷ ಪ್ರಯತ್ನದ ಬಗ್ಗೆ ನಿಮ್ಮ ಮತ ಕೇಳಿಕೊಂಡು ಸಂಪರ್ಕಕ್ಕೆ ಬರುವಂತಹ ಅಭ್ಯರ್ಥಿಗಳಿಗೆ ತಿಳಿಸಿ.
 • ನೀವು ಸಂಪರ್ಕದಲ್ಲಿರುವಂತಹ ರಾಜಕೀಯ ಪಕ್ಷಗಳಿಗೆ ಈ ಪುಟವನ್ನು ಕಳುಹಿಸಿ. ಇದನ್ನು ಆಯಾ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಕಳುಹಿಸುವಂತೆ ಮನವಿ ಮಾಡಿ.
 • ನಿಮ್ಮ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಹಂಚಿಕೊಳ್ಳಿ. ಅದರಿಂದ ಇದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಹಾಗೂ ಅಭ್ಯರ್ಥಿಗಳನ್ನು ತಲುಪಲು ಸಾಧ್ಯ.

ನೀವು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯಾಗಿದ್ದು ಈ ಪತ್ರನಮೂನೆಯನ್ನು ಭರ್ತಿ ಮಾಡಲು ಇಚ್ಛಿಸುತ್ತಿದ್ದಲ್ಲಿ ದಯವಿಟ್ಟು ಗಮನಿಸಿ:

 • ಈ ಅರ್ಜಿನಮೂನೆಯನ್ನು ಭರ್ತಿ ಮಾಡಿದಲ್ಲಿ ನೀವು ನಿಮ್ಮ ವಾರ್ಡಿನ ಅಭ್ಯರ್ಥಿಗಳನ್ನು ಹಾಗೂ ಸಾವಿರಾರು ಬೆಂಗಳೂರಿಗರನ್ನು ತಲಪುತ್ತೀರಿ.
 • ಈ ಅರ್ಜಿಯನ್ನು ನೀವೇ ಭರ್ತಿ ಮಾಡಬೇಕಿರುತ್ತದೆ. ಕಡ್ಡಾಯವಾಗಿರುವ ಎಲ್ಲಾ ವಿವರಗಳನ್ನೂ ಭರ್ತಿ ಮಾಡಬೇಕಿರುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ನಿಮಗೆ ನಮ್ಮಿಂದ ದೂರವಾಣಿ ಕರೆ ಬರುವ ಸಾಧ್ಯತೆಯಿದೆ.
 • ಕನ್ನಡದಲ್ಲಿ ಟೈಪ್ ಮಾಡಲು Google Transliterate, Quillpad ಅಥವಾ ಬರಹ, ನುಡಿ ಇತ್ಯಾದಿ ಸಾಫ್ಟ್ ವೇರುಗಳನ್ನು ಬಳಸಬಹುದು.
 • ನೆನಪಿಡಿ, ನೀವು ಭರ್ತಿ ಮೂಡುವ ಎಲ್ಲಾ ವಿವರಗಳೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿವೆ.
 • ಪಾಸ್ ವರ್ಡ್ ಅಥವಾ ಇತರ ಸೂಕ್ಷ್ಮ ವಿವರಗಳನ್ನು ಹಂಚಿಕೊಳ್ಳಬೇಡಿ.
 • ನೀವು ಭರ್ತಿ ಮಾಡುವ ವಿವರಗಳು ನಿಮ್ಮ ವಾರ್ಡಿಗೆ ಸಂಬಂಧಿಸಿದ ಪ್ರತ್ಯೇಕ ಜಾಗದಲ್ಲಿ ಪ್ರಕಟವಾಗಲಿವೆ. ಇಲ್ಲಿ ನೀವು ನಿಮ್ಮ ವಾರ್ಡಿಗೆ ಸಂಬಂಧಿಸಿದ ಇತರ ವಿವರಗಳು ಹಾಗೂ ಈ ಪ್ರಯತ್ನದಲ್ಲಿ ಭಾಗವಹಿಸಿದ ಇತರ ಅಭ್ಯರ್ಥಿಗಳ ವಿವರಗಳನ್ನು ನೋಡಬಹುದು.
 • ನೀವು ಎಷ್ಟು ಬೇಗ ಇದನ್ನು ತುಂಬುತ್ತೀರೋ, ಅಷ್ಟು ಜಾಸ್ತಿ ಸಮಯ ನಿಮ್ಮ ವ್ಯಕ್ತಿಚಿತ್ರ ನಿಮ್ಮ ಮತದಾರರಿಗೆ ಅಂತರ್ಜಾಲದಲ್ಲಿ ಕಾಣಿಸುತ್ತಿರುತ್ತದೆ.
 • ನೀವು ಈ ಅರ್ಜಿಯಲ್ಲಿ ಭರ್ತಿ ಮಾಡುವ ವಿವರಗಳಿಂದಾಗಬಹುದಾದ ಯಾವು ನಷ್ಟ ಅಥವಾ ತೊಂದರೆಗಳಿಗೆ ಊರ್ವಾಣಿ ಫೌಂಡೇಶನ್ ಅಥವಾ ಸಿಟಿಜನ್ ಮ್ಯಾಟರ್ಸ್ ಜವಾಬ್ದಾರರಲ್ಲ.
 • ನೀವು ನೀಡುವ ಮಾಹಿತಿಯನ್ನು ಇತರ ಮಾಧ್ಯಗಳ ಜತೆ ಹಂಚಿಕೊಳ್ಳುವ ಹಕ್ಕನ್ನು ಊರ್ವಾಣಿ ಫೌಂಡೇಶನ್ ಹೊಂದಿರುತ್ತದೆ.
 • ನಾವು ಇಲ್ಲಿ ನೀಡಿರುವ ಷರತ್ತಿಗಳಿಗೆ ಅನುಗುಣವಾಗಿಲ್ಲದಿದ್ದಲ್ಲಿ ಅದನ್ನು ಪ್ರಕಟಿಸದಿರುವ ಹಕ್ಕನ್ನು ಊರ್ವಾಣಿ ಫೌಂಡೇಶನ್ ಮತ್ತು ಸಿಟಿಜನ್ ಮ್ಯಾಟರ್ಸ್ ಹೊಂದಿರುತ್ತವೆ.
 • ನಿಮಗೆ ಈ ನಮೂನೆಯನ್ನು ತುಂಬಿಸುವಲ್ಲಿ ಯಾವುದೇ ತೊಂದರೆಯಾದಲ್ಲಿ ನಮಗೆ ಇಲ್ಲಿ ಕ್ಲಿಕ್ ಮಾಡಿ ಮಿಂಚಂಚೆ ಕಳುಹಿಸಿರಿ.
 • ನೀವು ಇಂಗ್ಲೀಷಿನಲ್ಲಿ ಈ ನಮೂನೆ ಭರ್ತಿ ಮಾಡಲು ಇಷ್ಟಪಟ್ಟಲ್ಲಿ ಇಲ್ಲಿ ಕ್ಲಿಕ್ ಮಾಡಿ: ಇಂಗ್ಲಿಷ್ ನಮೂನೆ

Related Articles

If you are contesting BBMP elections, now reach out to voters for free!
BBMP to go to polls on July 28th; New council by July 31st

Support Citizen Matters - independent, Reader-funded media that covers your city like no other.DONATE

1 Comment

Comments are closed.