Articles by Poornima Hegde

ಮೂಲಭೂತ ಸೌಲಭ್ಯದ ಸುವ್ಯವಸ್ಥೆಯೇ ಸುಂದರ ನಗರದ ಆಧಾರ. ಸಿಲಿಕಾನ್ ‌ಸಿಟಿ, ಉದ್ಯಾನನಗರಿ, ಐಟಿ-ಸಿಟಿ ಎಂದೆಲ್ಲ‌ ಕರೆಯಿಸಿಕೊಳ್ಳುವ ಬೆಂಗಳೂರು ಪ್ರತಿ ನಿತ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತಿರುವ ನಗರ. ಇಲ್ಲಿ ಪ್ರತಿ ಸೂರ್ಯೋದಯ ಹಾಗೂ ಸೂರ್ಯಾಸ್ತ ಗಳು ಕೂಡಾ ಹೊಸ-ಹೊಸ ಬೆಳವಣಿಗೆ, ಬದಲಾವಣೆ ಹಾಗೂ ಬೆಳವಣಿಗೆಗೆ ಸಾಕ್ಷಿಯಾಗುತ್ತವೆ. ಪ್ರತಿನಿತ್ಯ ವ್ಯವಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ - ಹೀಗೆ ನಾನಾ ಉದ್ದೇಶಗಳಿಗಾಗಿ ಸಾವಿರಾರು ಕನಸುಗಳನ್ನು ಹೊತ್ತು ನಮ್ಮ ರಾಜ್ಯದ ಹಳ್ಳಿಗಳಿಂದ ಆರಂಭಿಸಿ ದೂರದ ದೇಶದ ಸಾವಿರಾರು ಜನರು ಆಗಮಿಸುತ್ತಾರೆ. ಹೀಗೆ ಪ್ರತಿನಿತ್ಯ ಹೊಸ ಬದುಕು ಕಟ್ಟುವ ಸಾವಿರಾರು ಜನರಿಂದ ನಗರದ ಆಡಳಿತ, ಸುವ್ಯವಸ್ಥೆ ಹಾಗೂ ಸೌಲಭ್ಯ ಎಲ್ಲವೂ ಕೂಡಾ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ನಗರದಲ್ಲಿನ ಲಕ್ಷಾಂತರ ಮನೆಗಳು, ದಶಲಕ್ಷ ಲೀಟರನಷ್ಟು ನೀರಿನ‌ ಅಗತ್ಯ, ಸ್ವಚ್ಚತೆ, ಕಸದ ನಿರ್ವಹಣೆ, ರಾಜಕಾಲುವೆಗಳು ಹಾಗೂ ಚರಂಡಿಗಳ‌ ನಿರ್ವಹಣೆ ನಗರದ ಆಡಳಿತ ಪಾಲಿಗಿರುವ ಬಹುದೊಡ್ಡ ಸವಾಲು. ಹೀಗಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ನಗರದ ಪ್ರಥಮ‌ಪ್ರಜೆ ಮೇಯರ್…

Read more